
ಧ್ಯೇಯ ಮತ್ತು ದೃಷ್ಟಿಕೋನ
"ಮಣ್ಣಿನ ರಕ್ಷಣೆ - ರೈತನ ಸಬಲೀಕರಣ - ಸಮೃದ್ಧ ಸಮಾಜ ನಿರ್ಮಾಣ" ಕೃಷಿಯನ್ನು ಕೇವಲ ಕಾಯಕವನ್ನಾಗಿ ನೋಡದೆ, ಗೌರವಯುತ ಬದುಕಿನ ಮೂಲಧಾರವನ್ನಾಗಿ ಮಾಡುವುದು ಮತ್ತು ಪ್ರತಿಯೊಬ್ಬ ರೈತನಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸುವುದು ನಮ್ಮ ಮೂಲ ಉದ್ದೇಶ.

ರೈತರ ಒಗ್ಗಟ್ಟು: ಅಧ್ಯಕ್ಷರಾದ ಕಣಕೂರು ಚಂದ್ರಶೇಖರ್ ಅವರ ನೇತೃತ್ವದಲ್ಲಿ ಪ್ರತಿಯೊಬ್ಬ ರೈತನನ್ನೂ ಸಂಘಟಿಸುವುದು, ಗ್ರಾಮ ಗ್ರಾಮಗಳಲ್ಲಿ ಒಕ್ಕೂಟಗಳನ್ನು ರಚಿಸುವುದು ಮತ್ತು ರೈತ ಶಕ್ತಿಯನ್ನು ಶಿಸ್ತುಬದ್ಧವಾಗಿ ಒಟ್ಟುಗೂಡಿಸುವುದು.

ರೈತ ಸಂಘಟನೆ ಮತ್ತು ಹೋರಾಟ
ಹೋರಾಟದ ಹಾದಿ: ರೈತರ ಹಕ್ಕುಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ರಾಜಿಯಿಲ್ಲದ ದೃಢ ನಿರ್ಧಾರ ಹಾಗೂ ಗಟ್ಟಿಯಾದ ನಿಲುವಿನೊಂದಿಗೆ ಧ್ವನಿಯೆತ್ತುವುದು.
ಸಂಘಟನೆಯ ಬೆನ್ನೆಲುಬು – ನಮ್ಮ ಗ್ರಾಮ ಘಟಕಗಳು
ಪ್ರಾರಂಭಿಕ ಗ್ರಾಮ ಘಟಕಗಳು:- ಚಿಕ್ಕ ಶೆಟ್ಟಿ ಕೆರೆ, ಚಿಕ್ಕ ಬೀರನಕೆರೆ, ಕಲ್ಲು ನಾಗತಿಹಳ್ಳಿ, ಆನಡಗು, ಜನಾರ್ಧನಪುರ, ಬ್ಯಾಡರಹಳ್ಳಿ, ಮಲ್ಲೇನಹಳ್ಳಿ, ಚಟ್ಟನಹಳ್ಳಿ.
ಇತ್ತೀಚಿನ ಗ್ರಾಮ ಘಟಕಗಳು:- ವರಹಾಸಂದ್ರ, ಹುಲ್ಲೇಕೆರೆ, ಕಣಕೂರು, ಬಳೇಕಟ್ಟೆ, ಗೋಣಿ ತುಮಕೂರು, ಹಬಕನಹಳ್ಳಿ, ಕೆ. ಮಾವಿನಹಳ್ಳಿ, ಲಕ್ಷ್ಮೀ ದೇವರಹಳ್ಳಿ, ಹೊಣಕೆರೆ ಗೊಲ್ಲರಹಟ್ಟಿ, ಕಾಮನಹಳ್ಳಿ, ಬಾಣಸಂದ್ರ, ದುಮ್ಮನಹಳ್ಳಿ, ಗೋಪಾಲಪುರ, ದೇವಿಹಳ್ಳಿ.
ನಮ್ಮ ನಾಯಕತ್ವ
ನಮ್ಮ ನಾಯಕತ್ವದ
ತಂಡ

ಕಣಕೂರು ಚಂದ್ರಶೇಖರ್
ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ತುರುವೇಕೆರೆ ತಾಲ್ಲೂಕು
ನಮ್ಮ ಪ್ರಯಾಣ ಹಾಗೂ ನಾಯಕತ್ವ
- ಅಧ್ಯಕ್ಷರು:- ಕಣಕೂರು ಚಂದ್ರಶೇಖರ್ (ತುರುವೇಕೆರೆ ತಾಲ್ಲೂಕು ಅಧ್ಯಕ್ಷರು)
- 2011ರಲ್ಲಿ ಪಾದಾರ್ಪಣೆ: ಜನಪರ ಹಾಗೂ ರೈತಪರ ಹೋರಾಟಕ್ಕೆ ಅಧಿಕೃತ ಪಾದಾರ್ಪಣೆ.
- 2026 ಜನವರಿಯಿಂದ: ಕಣಕೂರು ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ತುರುವೇಕೆರೆ ತಾಲ್ಲೂಕಿನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯ ನಿರಂತರವಾಗಿ ಸಾಗಿದೆ.
- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾಗಿ 10-01-2026 ರಂದು ತಿಪಟೂರು ತಾಲ್ಲೂಕು ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಹಾಸಂಸ್ಥಾನದ ಶ್ರೀ ಕ್ಷೇತ್ರದಲ್ಲಿ ಅಧಿಕಾರ ಸ್ವೀಕಾರ

ಬಿಲ್ಲೇಮನೆ ವಿನೋದ್
ಪ್ರಧಾನ ಕಾರ್ಯದರ್ಶಿ

ಚಂದನ್ ಗೌಡ
ಸಾಮಾಜಿಕ ಜಾಲತಾಣ

ಸಂಘದ ಪ್ರಮುಖ ಉದ್ದೇಶಗಳು
1) ರೈತರ ಸಂಘಟನೆ ಹಾಗೂ ಶಕ್ತಿವರ್ಧನೆ:
ತಾಲ್ಲೂಕಿನ ಪ್ರತಿಯೊಬ್ಬ ರೈತನನ್ನೂ ಒಂದೇ ವೇದಿಕೆಯಡಿಯಲ್ಲಿ ತರುವುದು. ರೈತರಿಗೆ ಎದುರಾಗುವ ಸವಾಲುಗಳಿಗೆ ರೈತರೇ ಸಂಘಟಿತರಾಗಿ ಸ್ವತಂತ್ರ ಪರಿಹಾರ ಕಂಡುಕೊಳ್ಳುವಂತೆ ಸಶಕ್ತಗೊಳಿಸುವುದು.

2) ಅರಿವು ಮತ್ತು ಜ್ಞಾನ ವಿಸ್ತರಣೆ:-
ರೈತರಲ್ಲಿ ಸಾಮಾಜಿಕ, ಕಾನೂನು ಮತ್ತು ವೈಚಾರಿಕ ಅರಿವು ಮೂಡಿಸುವುದು. ರೈತರು ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ಜ್ಞಾನಾರ್ಜನೆಗೆ ಸೂಕ್ತ ಮಾರ್ಗದರ್ಶನ ನೀಡುವುದು.

3) ಆರ್ಥಿಕ ಸಬಲೀಕರಣ ಹಾಗೂ ಸಂಶೋಧನೆ:-
ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲು ಇರುವ ಮೂಲ ಕಾರಣಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಶಾಶ್ವತ ಪರಿಹಾರ ಕಂಡುಕೊಳ್ಳುವುದು. ಕೃಷಿ ವೆಚ್ಚ ತಗ್ಗಿಸಿ, ಆದಾಯ ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು.

4) ಸರ್ಕಾರ ಮತ್ತು ರೈತರ ನಡುವಿನ ಸೇತುವೆ:-
ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಯೋಜನೆಗಳು, ನಷ್ಟ ಪರಿಹಾರ ಮತ್ತು ಸವಲತ್ತುಗಳು ಅರ್ಹ ರೈತರಿಗೆ ತಲುಪುವಂತೆ ಮಾಡುವುದು. ರೈತರ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸುವುದು.

Our Programs
ನಮ್ಮ ಕಾರ್ಯಕ್ರಮಗಳು

ಕಾರ್ಯಕ್ರಮ

ಕಾರ್ಯಕ್ರಮ

ಕಾರ್ಯಕ್ರಮ

ಕಾರ್ಯಕ್ರಮ

ಕಾರ್ಯಕ್ರಮ

ಕಾರ್ಯಕ್ರಮ

ಕಾರ್ಯಕ್ರಮ

ಕಾರ್ಯಕ್ರಮ

ಕಾರ್ಯಕ್ರಮ

ಕಾರ್ಯಕ್ರಮ

ಕಾರ್ಯಕ್ರಮ

ಕಾರ್ಯಕ್ರಮ

ರೈತರೇ ದೇಶದ ಬೆನ್ನೆಲುಬು – ಸಂಘಟಿತ ಹೋರಾಟವೇ ನಮ್ಮ ಹಕ್ಕು
ಆಧುನಿಕ ಹಾಗೂ ವೈಜ್ಞಾನಿಕ ಕೃಷಿ ಉತ್ತೇಜನ

ಸಮಗ್ರ ಕೃಷಿ
01ಸಾಂಪ್ರದಾಯಿಕ ಕೃಷಿಯ ಜೊತೆಗೆ ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಸಮಗ್ರ ಕೃಷಿ (Integrated Farming) ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.
ನಮ್ಮ ಸಾಧನೆಗಳು ಮತ್ತು ವಿಸ್ತರಣೆ

ಸ್ಥಾಪನೆಯಾದ ವರ್ಷ
ಜನಪರ ಹೋರಾಟಕ್ಕೆ ಅಧಿಕೃತ ಪಾದಾರ್ಪಣೆ
ಇತ್ತೀಚಿನ ಗ್ರಾಮ ಘಟಕಗಳು
ಹೊಸದಾಗಿ ರಚಿಸಲಾದ ಗ್ರಾಮ ಘಟಕಗಳು
ಪ್ರಾರಂಭಿಕ ಗ್ರಾಮ ಘಟಕಗಳು
ಸ್ಥಾಪಕ ಗ್ರಾಮ ಘಟಕಗಳು
ಒಗ್ಗೂಡಿದ ರೈತರು
ನಾಯಕತ್ವದ ಅಡಿಯಲ್ಲಿ ಸಂಘಟಿತರಾಗಿದ್ದಾರೆ
Our Future
Action Plan
Farmers Protest


ನಮ್ಮ ನಾಯಕರ ಮಾತುಗಳು
"ಕೃಷಿಯನ್ನು ಕೇವಲ ಕಾಯಕವನ್ನಾಗಿ ನೋಡದೆ, ಗೌರವಯುತ ಬದುಕಿನ ಮೂಲಧಾರವನ್ನಾಗಿ ಮಾಡುವುದು ಮತ್ತು ಪ್ರತಿಯೊಬ್ಬ ರೈತನಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸುವುದು ನಮ್ಮ ಮೂಲ ಉದ್ದೇಶ."
ಕಣಕೂರು ಚಂದ್ರಶೇಖರ್
ಅಧ್ಯಕ್ಷರು
ನಮ್ಮ
ಕ್ಷಣಗಳು.
Farmers Protest
📍 Tumkur
General Body Meeting
📍 Bangalore
Water Conservation
📍 Mysore
Rally for Rights
📍 Mandya
Village Council
📍 Hassan







